ಅಯ್ಯೋ, ಸೂಪರ್ಸ್ಟಾರ್ ಚಿರಂಜೀವಿಯಾಗಲು ಲಿಂಗಬದಲಾವಣೆಯ ಸರ್ಜರಿ ಮಾಡಿಕೊಲ್ಲಬೇಕಾಗುತದೆ. ಈಗಾಗಲೇ ನಾಲ್ಕು ಸರ್ಜರಿಗಳಾಗಿವೆ ಸೊ ಅದರ ಪ್ರಶ್ನೆಯೇ ಇಲ್ಲ.
ಉಳಿದಿರುವ ಚಿರಂಜೀವಿಯಂದರೆ ಮರಣವಿಲ್ಲದವರು! ಇದರಬಗ್ಗೆ "informed decision " ತೆಗೆದುಕೊಳ್ಳಲು ಪರಶುರಮರನ್ನೋ ಇಲ್ಲಾ ಅಶ್ವತ್ಹಾಮರನ್ನೋ ಹುಡುಕಬೇಕು. ಆದರೆ ನಿಜವೆನ್ನಲು ಇದೇ ಶರೀರದಲ್ಲಿ ಚಿರಂಜೀವಿಯಾದರೆ, ಮುಪ್ಪು, ಮರವು, ನಿತ್ರಾಣ, ಇವೆಲ್ಲರ ಬಗ್ಗೆ ಬಯವಾಗುತದೆ, ಗೆಳೆಯರು, ನೆಂಟರು ಹೋದಮೇಲೆ ಒಂಟಿ ಜೀವನ ಬೇಡವೇ ಬೇಡ, ನಾನಂತೂ ಬಲಿ ಮಹಾರಾಜರಂತೆ ಸಂಜೀವನಿ ವಿದ್ಯೆ ಅರಿತು ಪುನರೋದ್ಧರವಾಗಲು ಸಾಧ್ಯವಿಲ್ಲ!
ಆದರೆ ಜನರ ಸ್ಮರಣೆಯಲ್ಲಿ ಅಮರವಾಗುವುದು --ಹ್ಮ್ಮ್ ??!! ನಾಟ್ ಬ್ಯಾಡ್ -- ಒಳ್ಳೆ ಐಡಿಯಾ.
ಅಯೋಧ್ಯೆಯ ರಾಮನ ಮನುಷ್ಯನಿಂದ -- ಆದರ್ಶ-- ತದನಂತರ ದೈವತ್ವದ "ಆಯನವು " ರಾಮಾಯಣವಾದಂತೆ ನನ್ನ ಆಯನವು "ಪಾರೋ-ಆಯನ "(ಆಡುಭಾಷೆಯಲ್ಲಿ ಪಾರಾಯಣವಾಗದಿದ್ದರೆ ಪುಣ್ಯ!) ಇಲ್ಲವೇ ಪಾರೂ-ಚರಿತಂ ಆಗಬಹುದಲ್ಲ, ದೆಫಿನಿತೆಲ್ಯ್ ನಾಟ್ ಬ್ಯಾಡ್! :)
No comments:
Post a Comment